<ಮಂಕುತಿಮ್ಮನ ಕಗ್ಗ
<ಮಂಕುತಿಮ್ಮನ ಕಗ್ಗ-ಕಂತು ೪; ಪದ್ಯ ೯೧ ರಿಂದ ೧೨೦;
<ಮಂಕುತಿಮ್ಮನ ಕಗ್ಗ-ಕಂತು ೫.ಪದ್ಯ ೧೫೧ ರಿಂದ ೧೮೦ ರ ವರೆಗೆ:ಅರ್ಥಸಹಿತ.
ಮಂಕುತಿಮ್ಮನ ಕಗ್ಗ;ಪದ್ಯ ೧೫೧ ರಿಂದ ೧೮೦ ವರೆಗೆ:ಅರ್ಥಸಹಿತ

ಪದ್ಯ– ೧೫೧
ದೈವವೆನಿಸಿರುತೆ ವಿಶ್ವಪ್ರಕೃತಿಶಕ್ತಿಯಲಿ |
ಜೀವವಾಸನೆಗಳಲಿ ಪೂರ್ವಕೃತವೆನಿಸಿ ||
ಧೀವರ್ತನೆಯಲಿ ಪೌರುಷವೆನಿಸಿ ಪರಸತ್ವ | 
ತ್ರೈವಿಧದೊಳಿರುತಿಹುದು – ಮಂಕುತಿಮ್ಮ
ದೈವವೆನಿಸಿರುತೆ = ದೈವ+ಎನಿಸಿ+ ಇರುತೆ// ತ್ರೈವಿಧದೊಳಿರುತಿಹುದು = ತ್ರೈವಿಧದೊಳು + ಇರುತಿಹುದು.
(೧.ಪೂರ್ವಕೃತವೆನಿಸಿ -ಪೂರ್ವಜನ್ಮದ ಕರ್ಮಫಲದ ಶಕ್ತಿ; ೨.ಸ್ವಂತ ಬುದ್ಧಿಯ ಶಕ್ತಿ, ತನ್ನ ಜೀವನರೂಪಿಸಲು ಉಪಯುಕ್ತ; ೩.ತನ್ನತನ, ತನ್ನಸ್ವಂತ ಪುರುಷ ಪ್ರಯತ್ನದಿಂದ ತನ್ನಜೀವನ ರೋಪಿಸಿಕೊಳ್ಳುವ ಪೌರುಷಶಕ್ತಿ. ಚಂ.)
(ಇಲ್ಲಿ ವಿಶ್ವ ಚೇತನದ ಮೂಲ ಶಕ್ತಿಗಳಾದ ಜ್ಞಾನಶಕ್ತಿ, ಇಚ್ಛಾಶಕ್ತಿ,  ಕ್ರಿಯಾಶಕ್ತಿಗಳನ್ನು ಹೇಳಿದಂತೆ ತೋರುವುದಿಲ್ಲ. - ಮಾನವನಿಗೆ ಅನ್ವಯಿಸಿದ ಮೂರು ದೈವ-ಪ್ರಕೃತಿಶಕ್ತಿಗಳನ್ನು ಮಾತ್ರಾ ಹೇಳಿದಂತೆ ತೋರುವುದು.ಚಂ.)
ಮಂಕುತಿಮ್ಮನ ಕಗ್ಗ - ಡಿ.ವಿ.ಜಿ.
♠೫೫೫೫೫೫೫೫೫೫೫೫೫೫೫೫೫೫♠
-೦♦♦♣♣♣♣♣♣♣♣♣♣♣♣♦♦೦-

ನೋಡಿ
<ಮಂಕುತಿಮ್ಮನ ಕಗ್ಗ-ಕಂತು ೫. ಅರ್ಥ ಸಹಿತ
ಮಂಕುತಿಮ್ಮನ ಕಗ್ಗ-ಕಂತು ೭.> ಅರ್ಥ ಸಹಿತ

ನೋಡಿ

ಉಲ್ಲೇಖ

 ಮಂಕುತಿಮ್ಮನ ಕಗ್ಗ
ವರ್ಗ: ಡಿ.ವಿ.ಜಿ. ಸಾಹಿತ್ಯ